ಮರ್ಸಿಡಿಸ್ ಬೆಂಝ್ ಮುಂದಿನ ವಾರ ಮೇಬ್ಯಾಕ್ ಜಿಎಲ್ಎಸ್ 600 ಅಲ್ಟ್ರಾ-ಐಷಾರಾಮಿ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಜಿಎಲ್ಎಸ್ 600 ಮೇಬ್ಯಾಕ್ ಸರಣಿಯಲ್ಲಿ ಬಿಡುಗಡೆಯಾಗುತ್ತಿರುವ ಕಂಪನಿಯ ಮೊದಲ ಎಸ್‌ಯುವಿಯಾಗಿದೆ.
2019ರಲ್ಲಿ ಮೊದಲ ಬಾರಿಗೆ ಜಾಗತಿಕವಾಗಿ ಅನಾವರಣಗೊಂಡ ಈ ಎಸ್‌ಯುವಿಯು ಕಳೆದ ವರ್ಷ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಯಿತು. ಈ ಅಲ್ಟ್ರಾ ಐಷಾರಾಮಿ ಎಸ್‌ಯುವಿಯು ಸ್ಟಾಂಡರ್ಡ್ ಮಾದರಿಗೆ ಹೊಲಿಸಿದರೆ ಹಲವಾರು ಬದಲಾವಣೆಗಳನ್ನು ಹೊಂದಿರಲಿದೆ.
ಜಿಎಲ್ಎಸ್ 600 ಮೇಬ್ಯಾಕ್ ಎಸ್‌ಯುವಿಯಲ್ಲಿ ದೊಡ್ಡ ವರ್ಟಿಕಲ್ ಸ್ಲ್ಯಾಟ್ ಗ್ರಿಲ್, ವಿಂಡೋ ಲೈನ್, ಸೈಡ್-ಸ್ಟೆಪ್, ಮುಂಭಾಗ ಹಾಗೂ ಹಿಂಭಾಗದ ಬಂಪರ್‌ಗಳಲ್ಲಿ ಡಿಸೈನ್ ಅಸೆಂಟ್, ರೂಫ್ ರೇಲ್ ಹಾಗೂ ಎಕ್ಸಾಸ್ಟ್ ಟಿಪ್'ಗಳನ್ನು ಹೊಂದಿದೆ.
ಜಿಎಲ್ಎಸ್ 600 ಎಸ್‌ಯುವಿ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.